Friday, December 12, 2014

"ಕಲ್ಪನಾ"

ಬಿಡಿಸಿಟ್ಟ ಬೆರಳುಗಳ ಕಂಡಾಗಲೆಲ್ಲಾ
ಬೆರಳನ್ನು ಬೆರಳಲ್ಲಿ ನೀ ಕಟ್ಟುತ್ತಿದ್ದಾ, ನೆನಪು
ನೆಪ ಹೇಳಿಕೊಂಡು ತಡವಾದಾಗಲೆಲ್ಲಾ
ಮುತ್ತಿಡುವಂತ ಮುಷ್ಟಿಯಲಿ ನೀ ಮೊಟಕುತ್ತಿದ್ದಾ ನೆನಪು.

ಮರೆತಿಲ್ಲ ನಿನ್ನನ್ನು ಇನ್ನೂ ನನ್ನಾಣೆ !

ಕಾಣದಿರು ಕಣ್ಣೆದುರು ಬೇಡಿದರೂ ನಾನು 
ನಾ ಕಣ್ಮುಚ್ಚುವ ಕ್ಷಣವೇ ನಿನಗೆ, ಆಹ್ವಾನ
ಸಂತೆಯಲ್ಲೂ ಕಳೆದೋಗುವಂತ, ಒಡನಾಟಕೆ
ಕಣ್ಮುಚ್ಚಿದರೆ ಆವರಿಸೋ ಕತ್ತಲೇ ಸೋಪಾನ

ಮರೆತಿಲ್ಲ ನಿನ್ನನ್ನು ಇನ್ನೂ ನನ್ನಾಣೆ!

ಕವಿತೆಗೆಂದು ಕೂತಾಗ ಕಲ್ಪನೆಯಲಿ ಕೂರುವೆ
ಕಲ್ಪನೆಯೇ ನಿನ್ನ ವಿಳಾಸವೆನ್ನಲೇ ?
ಯಾರು ನೀ ಎಂದು, ನನ್ನವಳು ಕೇಳಿದರೆ
"ಕಲ್ಪನಾ" ಎಂದು ನಿನ್ನ ಹೆಸರೇಳಲೇ ?

ಮರೆಯೋಲ್ಲ ನಿನ್ನನ್ನು ಎಂದೂ ನನ್ನಾಣೆ.

                          - ಶ್ರೀ


Thursday, February 2, 2012



                                      ಗಾಳಿಪಟವನ್ನೇ ನೋಡುತ್ತಾ ಬಂದವನು 
                         ಆದರೆಂದೂ ಹಾರಿಸಿದವನಲ್ಲ  

                          ನಿನ್ನಂದವನ್ನೇ ನೋಡುತ್ತಾ ಬಂದವನು 
                          ಆದರೆಂದೂ ಮೋಹಿಸಿದವನಲ್ಲ
            
                                                                -ಶ್ರೀ





Friday, December 30, 2011

New Year !!!

ಮತ್ತದೇ ಹರುಷ ಮತ್ತೊಂದು ವರುಷಕೆ 
ದೇವರಾಣೆ ಗೊತ್ತಿಲ್ಲ ಏಕೆಂದು ?
ಕ್ಯಾಲೆಂಡರ್ ಬಿಟ್ಟರೆ ಬೇರೇನೂ ಚೇಂಜ್ ಇಲ್ಲ 
ನಾ ಕಾಣೆ ನಾವೇಕೆ ಹೀಗೆಂದು ?

ಈ ಮೇಲಿನ  ಎರೆಡು ಪ್ರಶ್ನೆ ಗಳು ನನ್ನ ಸ್ಕೂಲ್ ನಲ್ಲಿ New year celebration ಗೆ  ಅಂತ  ೧೦ ರೂಪಾಯಿ ಕೂಟ್ಟಾಗಿನಿಂದ ಬೇರೆ ಬೇರೆ ರೀತಿಯಲ್ಲಿ  ಕಾಡ್ತಾನೆ ಇದೆ, ಆದರೂ loss ಏನು  ಇರ್ಲಿಲ್ಲ  ಬಿಡಿ, ಕೇಕ್, ಚಿಪ್ಸ್ ತಿನ್ಕೊಂಡು,ಇದೆ  ನೆಪದಲ್ಲಿ  ಕ್ಲಾಸಿನ  ಸುಂದರಿಯ   ಕ್ಯೆ  ಕುಲುಕಿ  , ಒಂದು ವಾರದ ನಂತರ classnalli ಹಚ್ಚಿದ colour ಪೇಪರ್ ಕಿತ್ತ್ಕೊಂಡು  ಮನೆಗೆ  ಬಂದು  ಬಿಟ್ಟರೆ  ಅಲ್ಲಿಗೆ   ಪೈಸ   ವಸೂಲ್  ಆಗಿರ್ತಿತ್ತು  ಆವಾಗ , ಆದರೆ  ಇತ್ತೀಚಿಗೆ   I mean ತಿಳುವಳಿಕೆ  ಬಂದಾಗಿನಿಂದ  ಪ್ರಶ್ನೆ  ಕಾಸಲ್ಲ , ಯಾಕೆ  ಈ  New year ಹತ್ತಿರ ಬರುತ್ತಿದ್ದಂತೆ , ಏನು  ಮಾಡೋದು ? ಎಲ್ಲಿಗೆ  ಹೋಗೋದು ? ಹೇಗ್  ಮಾಡೋದು  ? celebration ಇಂತಾ  ತಲೆ  ಹಾಳು ಪ್ರಶ್ನೆಗಳು ಮನೆ  ಮಾಡ್ತವೆ . 31 ಕ್ಕೆ  ಹುಟ್ಟೋ  ಸೂರ್ಯ  1 ಕ್ಕೂ  ಹುಟ್ಟುತ್ತಾನೆ  , 31 ಕ್ಕೆ  ಮನೆಗೆ  ಬಂದ  ನಂದಿನಿ  ಹಾಲು  1 ಕ್ಕೂ  ಬರುತ್ತೆ  , ಈ  ವರ್ಷ   ಕೆಲಸ  ಮಾಡದ  ಮ್ಯಾನೇಜರ್ ಮುಂದಿನ  ವರ್ಷವೂ  ಮಾಡೋಲ್ಲ,  ಮತ್ತೆ  ಯಾಕೆ  ಈ  ಸಂಭ್ರಮ    ಅಂತಹ  ಗೆಲುವಾದುರು  ಏನು  ಆ  ದಿನ  ? 

ಕಾದು ನೋಡಿ  ಬ್ರೇಕ್ ನಂತರ , stay tuned to FB , ಈಗಲೇ ಚರ್ಚಿಸೋಣ ..

ಈ  ಮೇಲಿನ  ಪ್ರಶ್ನೆಯನ್ನ  ನಮ್ಮ  ಗೆಳೆಯ  ಮಂಜನಿಗೆ  ಕೇಳಿದಾಗ 
" ನೋಡಿ , New year ಅಂದರೆ  ಹೊಸ  ವರುಷ  ಅದು  ಹೊಸಾದು  , ಹೊಸಾದು  ಅಂದರೆ  ಯಾರಿಗಿಷ್ಟ  ಇಲ್ಲ  ಹೇಳಿ  , ನನಗಂತು  ತುಂಬ  ಇಷ್ಟ  .. ನಾ  ವರ್ಷ  ಎಲ್ಲ  ಕಾಯೋದೇ  New year ಗೋಸ್ಕರ , I love celebrating this moment "
ಅದೇ  ಪ್ರಶ್ನೆಯನ್ನ  shylu ನ  ಕೇಳಿದಾಗ 
" You know my boy friend surprises me every New year with some special gift, that I have ordered him from last month, that's why I love celebrating that moment "

ನನಗನ್ನಿಸಿದ ಕಾರಣ, ನಮ್ಮೆಲ್ಲರ ಪ್ರೀತಿಯ ನಮ್ಮ ಭೂಮಿ ಒಂದು ಅಂದಾಜಿನಂತೆ Dec 31 ರಾತ್ರಿ  12 ಕ್ಕೆ  ಸೂರ್ಯನನ್ನು  ಒಂದು  ಸುತ್ತೊಡೆದು  ಅದೇ  ಕ್ಷಣ  ಮತ್ತೊಂದು  ಸುತ್ತಿಗೆ  ಮುನ್ನುಗುತ್ತಾಳೆ  ,  ಆ  ಶ್ರಮ  ಜೀವಿಯ  ಯಶಸ್ವಿ  ಪ್ರಯಾಣಕ್ಕೆ  ಮತ್ತು  ಮುಂದಿನ  ಸುತ್ತಲ್ಲೂ  ಅದೇ  ತಾಳ್ಮೆಯಿಂದ  ಸೂರ್ಯ  ಮತ್ತು  ಪರಿಚಿತ  ಗ್ರಹಗಳೊಡನೆ  ಅದೇ  ಹೊಂದಾಣಿಕೆಯಿಂದ  ಸಾಗಿ ಯಾವುದೇ  ಪ್ರಕೃತಿ  ವಿಕೋಪಗಳಿಗೆ ಎಡಮಾಡಿಕೊದದಿರಲಿ  ಎಂದು ಆಚರಿಸುವ ಮತ್ತು ಹರಿಸುವ  ಒಂದು  ಸಂಬ್ರಮದ ಕ್ಷಣ .

ಏನೋ ಬಿಡಿ , ತುಂಬಾ emotional  ಆಗಿ ಯೋಚನೆ ಮಾಡಿದಾಗ ಸಿಕ್ಕ ಕಾರಣ ಅದು , ಅದರ ಅವಶ್ಯಕತೆ ಇಲ್ಲ ಅಂತ ತಿಳಿದದ್ದು ಇನ್ನೊಬ್ಬ ಗೆಳತಿ " It 's  just  a  reason  to  decorate  and  have  fun " ಎಂದು ಹೇಳಿದಾಗ.

ಆಯ್ತು ಹಾಗಾದರೆ , ಹೊಸ ವರುಷದ ಶುಭಾಶಯಗಳು ... :-)
                                                                        
                                                                          - ಶ್ರೀ















Monday, December 12, 2011

ಆ ದಿನಗಳು !!

 ಅಷ್ಟಿಷ್ಟು ಸಿಕ್ಕಷ್ಟು ಕೂಡಾಕುವೆ
ಹಳೆ ನೆನಪನ್ನು ನಾ  ಕೆದರಿ, ಕ್ಯೆ ಹಾಕುವೆ
ಎಲ್ಲಾನು  ಸುಂದರ ಆ ವಯಸಲಿ 
ನೆನೆದರೆ  ಕಣ್ಣೀರು, ಈ ಹೊತ್ತಲಿ..

ಅಮ್ಮ, ನೀ ನನ್ನ ಜೊತೆ ಇದ್ದೆ ೫ ರ ವರೆಗೆ
ಅಲ್ಲಿಂದ ಮುಖ ಮಾಡಿದೆ, ಶಾಲೆ ಕಡೆಗೆ
ಎಲ್ಲಿಂದ ಶುರು ಮಾಡಲಿ, ಎಲ್ಲ ಹೊಸ ಪರಿಚಯ
ಪಕ್ಕ ಕೂತವನೆ ನನಗಾದ ಮೊದಲನೆ ಗೆಳೆಯ ..

height  wise ಕೂತಾಗ ಮೂರನೇ ಬೆಂಚು
ನನಗಿಷ್ಟ  ಆಗ್ತಿದ್ದು  ಆ last ಬೆಂಚು
ಶಿಸ್ತಂದ್ರೆ ಸಾಯ್ತಿದ್ಲು, ನಮ್ ಕ್ಲಾಸ್ teacher
ಅವಳಂತೆ ಕುಣಿತಿದ್ದ, ನಮ್ ಕ್ಲಾಸ್ ಲೀಡರ್..

 ಶುರುವಾಯ್ತು ನಾಚಿಕೆ  ನಿಕ್ಕರ್ ಹಾಕೋಕೆ
 ಅಪ್ಪ ಕೇಳಿದ್ದ, ಈಗಲೇ ಪ್ಯಾಂಟ್ ಯಾಕೆ ?
 ಚಿಕ್ಕ ಜಡೆ ಹುಡುಗಿ ನನ್ನ notes ಕೇಳ್ತಿದ್ದಳು
 ನನ್ನ ಹೊಸ ಪ್ಯಾಂಟ್ ನೋಡಿ ತುಂಬ ನಕ್ಕಿದಳು..

ಗೆಳೆಯ ಊರು ಬಿಡೋವಾಗ ನಾ ಅತ್ತಿರಲಿಲ್ಲ
ಕಂಡಷ್ಟು ದೂರ, ಅವನನ್ನು ನೋಡದೆ ನಾನಿರಲಿಲ್ಲ
ತುಂಬಾ ಚೆನಾಗಿದ್ದವು ಆ ದಿನಗಳು
ನೆನೆಯಲಷ್ಟೆ ಈಗ ಆ ಕ್ಷಣಗಳು..

ಅಷ್ಟಿಷ್ಟು ಸಿಕ್ಕಷ್ಟು ಕೂಡಾಕುವೆ
ಹಳೆ ನೆನಪನ್ನು ನಾ  ಕೆದರಿ ಕ್ಯೆ ಹಾಕುವೆ
ಎಲ್ಲಾನು  ಸುಂದರ ಆ ವಯಸಲಿ 
ನೆನೆದರೆ  ಕಣ್ಣೀರು ಈ ಹೊತ್ತಲಿ
                                 -ಶ್ರೀ




















Monday, October 31, 2011

ಕರೆಯೋಲೆ ...

ಬಾ ಕಳೆದೋಗುವ, ಕನ್ನಡಿ ಕಣ್ಣಿಗೂ ಕಾಣದಷ್ಟು ದೂರ
ನಮಗೂ ತಿಳಿಯದೆ ಯಾರಿಗೂ ಹೇಳದೆ
ಮೊನ್ನೆ ಕನಸಲ್ಲಿ ಕಂಡಿದ್ದೆ ಸಜ್ಜಾದ ಊರನ್ನು
ಕರೆದೊಯ್ಯಲು ನಿನ್ನ ಅಪ್ಪಣೆ ಬೇಕಿನ್ನು

ಕ್ಯಗೆಟುಕುವ ನಕ್ಷತ್ರ ನನ್ನಾಣೆ ಆ ಊರಲ್ಲಿ
ಕಣ್ ಸಜ್ಞೆಗೆ ಮೋಡ ಕರುಗುವುದು ಬಾನಲ್ಲಿ
ನಿನ್ನಿಷ್ಟದ ಹಾಡಿಗೆ ಕುಣಿಯುವುದು ನವಿಲು
ನಿನ್ನಿಷ್ಟದ ಬಣ್ಣ ಹಚ್ಚುವುದು ಮುಗಿಲು

ತಿಳಿ ನೀರ ಸರೋವರ ನೀ ನೋಡಲು ಕನ್ನಡಿ
ಕರೆದೊಯ್ಯುವೆ  ಅಲ್ಲಿಗೆ ಬಾ ನನ್ನ ಕ್ಯೆ ಹಿಡಿ...
ಹೆಣೆಯುತ ಕಲ್ಪನೆ ಹೀಗೊಂದು ಪದಮಾಲೆ
ಕನಸಿನಾ ಊರಿಗೆ ನಿನಗಷ್ಟೆ ಈ ಕರೆಯೋಲೆ ...

                                    - ಶ್ರೀ 



Saturday, October 22, 2011

ಯಾರಿಗ್ ಹೇಳೋಣ ನಮ್ಮ ಪ್ರಾಬ್ಲೆಮ್ಮು

ಹುಡುಗ : ನೋಡಿ ನಂಗೆ ಮಾತಾಡೋಕೆ ಬರೊಲ್ಲ , ಇರೋ ವಿಷಯ ಇದ್ದಂಗೆ ಹೇಳ್ಬಿಡ್ತೀನಿ ಅಂತ ಹೇಳೋಕೆ ನಂಗಿಷ್ಟ ಇಲ್ಲ ...
              ಒಂದ್ ಮಾತಲ್ಲಿ ಹೇಳಿ ಒಂದ್ ಹಾಳೆಲಿ ಗೀಚಾಕೊದಾಗಿದ್ರೆ ನಾ ಇಷ್ಟು ದಿನ ಕಾಯೋ ಅವ್ಯಶ್ಯಕತೆ ಇರಲಿಲ್ಲ ... ಇವತ್ತಿನ ನಂತರ ನನ್ ಜೀವನ ಮುಗಿಲಿಗೆ ಬಣ್ಣ ಎರೆಚೋ ಕಾಮನಬಿಲ್ಲಿನ ಥರನಾದರೂ ಆಗಬಹುದು ಟೈಮ್ ಚೆನ್ನಾಗಿಲ್ದೆ ಹೋದ್ರೆ ಬಿಜಾಪುರ ಬಸ್ ಮೂಲೆಯಲ್ಲಿ ಉಗಿಯೋ ಎಲೆ ಅಡಿಕೆ ಥರ ನಾದ್ರೂ ಆಗ್ಬೋದು.. so matter serious .. ನೀವು ನೆಮ್ಮದಿ ಕಳಕೊಳ್ಳದೆ ...ನಾ  ಹೇಳೋ ಮಾತಿಗೆ ನಿಮ್ಮ ಕೇಳೋ ಕಿವಿನಾ ಒತ್ತೆ ಇಡಿ ...
ನಾ ಸ್ವಲ್ಪ practical .. ಆದ್ರೆ ನಿಮ್ಮನ್ನ ನೋಡಿದಾಗ ಭಾವುಕನಾದೆ
24 ವರ್ಷದಿಂದ ಪರಿಚಯ ಇರೋ ಈ ಹೃದಯ 85 ರ ಮೇಲೆ ನಿಮಿಷಕ್ಕೆ ಎಂದೂ ಬಡಿದಿರಲಿಲ್ಲ .. ನೀವ್  ಕಂಡ್ರಿ ... metre  ಕಿತ್ಕೊಂಡ್ ಹೋಗೋ ಹಾಗೆ ಬಡಿಯೋಕ್ ಶುರುವಾಯ್ತು ... ಅರೆ .. ನೀವ್ ಯಾರ್ ರೀ ನನ್ನ ಈ ರೇಂಜಿಗೆ ತಲೆ ಕೆಡ್ಸೋಕೆ ? ಇದು ನನ್ನ ನಾ ಕೇಳ್ಕೊಂಡ್ ಪ್ರಶ್ನೆ ... google ನಲ್ಲಿ ಉತ್ತರ ಸಿಗೋ ಪ್ರಶ್ನೆ ಅಲ್ಲ ಇದು .. ಸೊ ಅ ಪ್ರಶ್ನೆ ಇನ್ನು ಹಾಗೆ ಇದೆ .. ಅದು ಬಿಡಿ
ಮ್ಯಾನೇಜರ್ ಗೆ ಮೆದುಳು ಕೊಟ್ಟು ನಿಮಗೆ ಮನುಸ್ ಕೊಟ್ಟು .. ಇನ್ನು ಉಳ್ದಿರೋ ತಲೇನ  ದಿಂಬಿಗೆ ಕೊಟ್ಟು ಮಲ್ಗೋಣ ಅಂದ್ರೆ... ಆಗಲು ಏನ್ರಿ ನಿಮ್ದು... ನೆಮ್ಮದಿಯಾಗಿ ನಿದ್ದೆ ಮಾಡೋಕು ಬಿಡೋಲ್ಲ ... ಭೂಕಂಪ ಆಗಿ ಮನೆ ಕುಸ್ದೊದ್ರು .. ಕಣ್ ತೆಗಿದೆ ಎಡಗಡೆ ಇಂದ ಬಲಕ್ಕೆ  ತಿರುಗಿ ಮಲಗಿದವ್ನು ನಾನು .. ಕಣ್ ಇರ್ಲಿ ಬಾಯಿ ಕೂಡ ತೆಗದು ಮಲಗೋ ಸ್ತಿಥಿಗ್ ತಂದಿದೀರ .. ನಿಮ್ಮನ್ನ ಅನ್ನೋದ್ರಲ್ಲಿ ಅರ್ಥ ಇಲ್ಲ ಬಿಡಿ .. ನಾವ್ ಹುಡುಗರೆ ಹೀಗೆ ..  ಆಳನೂ ನೋಡದೆ ಈಜು ಬರುತ್ತೆ ಅನ್ನೋ ಧೈರ್ಯದಲ್ಲಿ ಹಾರಿಬಿಡ್ತ್ಹೀವಿ .. ಬಿದ್ ಮೇಲೆ ಬೈಕೊಳೋಣ ಅಂತ ಮೇಲ್ ನೋಡಿದ್ರೆ ಅಲ್ಲೂ ಯಾರ್ ಇರೋಲ್ಲ ...
ನನಲ್ಲಿ ಇಷ್ಟೆಲ್ಲಾ ಅನಾಹುತಗಳಾಗಿದಾವೆ  ಅಂತ ನಿಮಗೆ ಒಂದ್ ಸುಳಿವು ಇಲ್ಲ ಅಂತ ನಂಗೊತ್ತು ..
ನಾ ಇಷ್ಟೆಲ್ಲಾ ಮಾತಾಡ್ತಿದ್ರು ನೀವು ಪಿಕ್ಚರ್ climax ಥರ ನೋಡ್ತಿರೋ ಮುಖ ನೋಡಿದ್ರೆ ನನಗ್ಯಾಕೋ ಹೆದರಿಕೆ ಆಗುತ್ತೆ ... ಕೊನೆ ಒಂದ್ ಮಾತ್ ಹೇಳಿ ಮನಸ್ ಗಟ್ಟಿ ಮಾಡ್ಕೊಂಡ್ ನಿಮ್ಮ ಉತ್ತರ ಕೇಳೋಣ ಅಂದ್ರೆ ... ಆ ಮನಸು ನನ್ನತ್ರ ಇಲ್ಲ ... ಗಟ್ಟಿ ಹಿಡಿಯೋಕೆ ಉಳ್ದಿರೋದು ಜೀವ ಒಂದೇ ..
ಆಯಿತು ಕೊನೆಮಾತು ಕೇಳೇ ಬಿಡಿ ... ನಂಗೆ ನೀವಂದ್ರೆ ತುಂಬಾ ಇಷ್ಟ .. ನೀವ್  ಹ್ಞೂ ಅಂದ್ರೆ ಇನ್ನುಳ್ದಿರೋ ದಿನಗಳನ್ನ ಕ್ಯಾಲೆಂಡರ್ ನೋಡ್ ದೇ ನಿಮ್ಮ ಜೊತೆ ಕಳ್ದ್ಬಿಡ್ತೀನಿ    ಏನಂತೀರ ?
ಹುಡುಗಿ : ನೀವು ಈ ಮಾತನ್ನ 1  ತಿಂಗಳ ಹಿಂದೆ ಹೇಳಿದ್ರೆ .. ನಾ ಯೋಚನೆ ಮಾಡ್ತಿದ್ದೆ .. ಆದ್ರೆ ನಮ್ಮಮ್ಮ ನನಿಗೆ ಗಂಡು ನೋಡಿದಾರೆ ..
ಹುಡುಗ ಮನದೊಳಗೆ : ಮತ್ತೆ ನಾವ್ ಯಾರು ..
ಹುಡುಗಿ : ಅವ್ರು US  ನಲ್ಲಿ software  engineer  ಅಲ್ಲೇ settled ... I  am  sorry ...
(ಹುಡುಗಿ ಹಿಂದಿರುಗಿ ಹೊರಟು ಬಿಡುತ್ತಾಳೆ)
ಹುಡುಗ ಮುಗುಳ್ನಗುತ್ತಾ... ಕೆಳಗಡೆ ನೋಡ್ತಾನೆ .. ಕೊಟ್ಟೆ ಅನ್ಕೊಂಡಿದ್ದ ಮನಸು ಕೆಟ್ಟದಾಗಿ ಕೆಸರಲ್ಲಿ ಬಿದ್ದಿರುತ್ತೆ
( background  ನಲ್ಲಿ  ನಮ್ಮ ಭಟ್ರ್ ಸಾಂಗ್ with full  patho  ಮ್ಯೂಸಿಕ್  "ಯಾರಿಗ್ ಹೇಳೋಣ ನಮ್ಮ ಪ್ರಾಬ್ಲೆಮ್ಮು ")


                                                                                       - ಶ್ರೀ



Thursday, May 26, 2011

ನನ್ ಸಾಂಗು

ಉದ್ಧಾರ ಆಗೋ chance ಇಲ್ಲಾ ...
ಅನ್ನುತ್ತಾರೆ ನನ್ನ ನೋಡಿದವರೆಲ್ಲಾ ..
ಆದರು ನನ್ನಲ್ಲಿ ಏನೋ ಒಂದು ನಂಬಿಕೆ 
ನನಗು ಬರುವುದು ಎಲ್ಲಿಲ್ಲದ ಬೇಡಿಕೆ ...

ಈಗಲೇ ಇದ್ದರೆ ತನ್ನಿ ಖಾಲಿ ಹಾಳೆ 
busy ಆಗಬಹುದು ಬಹುಶ ನಾನು ನಾಳೆ 
ಆದರು ಪರವಾಗಿಲ್ಲ ನೀನು ನನ್ನ friend 
touch ನಲ್ಲಿತೀರ್ನಿ, you never mind 

                             -ಶ್ರೀ