ಅಷ್ಟಿಷ್ಟು ಸಿಕ್ಕಷ್ಟು ಕೂಡಾಕುವೆ
ಹಳೆ ನೆನಪನ್ನು ನಾ ಕೆದರಿ, ಕ್ಯೆ ಹಾಕುವೆ
ಎಲ್ಲಾನು ಸುಂದರ ಆ ವಯಸಲಿ ಹಳೆ ನೆನಪನ್ನು ನಾ ಕೆದರಿ, ಕ್ಯೆ ಹಾಕುವೆ
ನೆನೆದರೆ ಕಣ್ಣೀರು, ಈ ಹೊತ್ತಲಿ..
ಅಮ್ಮ, ನೀ ನನ್ನ ಜೊತೆ ಇದ್ದೆ ೫ ರ ವರೆಗೆ
ಅಲ್ಲಿಂದ ಮುಖ ಮಾಡಿದೆ, ಶಾಲೆ ಕಡೆಗೆ
ಎಲ್ಲಿಂದ ಶುರು ಮಾಡಲಿ, ಎಲ್ಲ ಹೊಸ ಪರಿಚಯ
ಪಕ್ಕ ಕೂತವನೆ ನನಗಾದ ಮೊದಲನೆ ಗೆಳೆಯ ..
height wise ಕೂತಾಗ ಮೂರನೇ ಬೆಂಚು
ನನಗಿಷ್ಟ ಆಗ್ತಿದ್ದು ಆ last ಬೆಂಚು
ಶಿಸ್ತಂದ್ರೆ ಸಾಯ್ತಿದ್ಲು, ನಮ್ ಕ್ಲಾಸ್ teacher
ಅವಳಂತೆ ಕುಣಿತಿದ್ದ, ನಮ್ ಕ್ಲಾಸ್ ಲೀಡರ್..
ಶುರುವಾಯ್ತು ನಾಚಿಕೆ ನಿಕ್ಕರ್ ಹಾಕೋಕೆ
ಅಪ್ಪ ಕೇಳಿದ್ದ, ಈಗಲೇ ಪ್ಯಾಂಟ್ ಯಾಕೆ ?
ಚಿಕ್ಕ ಜಡೆ ಹುಡುಗಿ ನನ್ನ notes ಕೇಳ್ತಿದ್ದಳು
ನನ್ನ ಹೊಸ ಪ್ಯಾಂಟ್ ನೋಡಿ ತುಂಬ ನಕ್ಕಿದಳು..
ಗೆಳೆಯ ಊರು ಬಿಡೋವಾಗ ನಾ ಅತ್ತಿರಲಿಲ್ಲ
ಕಂಡಷ್ಟು ದೂರ, ಅವನನ್ನು ನೋಡದೆ ನಾನಿರಲಿಲ್ಲ
ತುಂಬಾ ಚೆನಾಗಿದ್ದವು ಆ ದಿನಗಳು
ನೆನೆಯಲಷ್ಟೆ ಈಗ ಆ ಕ್ಷಣಗಳು..
ಅಷ್ಟಿಷ್ಟು ಸಿಕ್ಕಷ್ಟು ಕೂಡಾಕುವೆ
ಹಳೆ ನೆನಪನ್ನು ನಾ ಕೆದರಿ ಕ್ಯೆ ಹಾಕುವೆ
ಎಲ್ಲಾನು ಸುಂದರ ಆ ವಯಸಲಿ ಹಳೆ ನೆನಪನ್ನು ನಾ ಕೆದರಿ ಕ್ಯೆ ಹಾಕುವೆ
ನೆನೆದರೆ ಕಣ್ಣೀರು ಈ ಹೊತ್ತಲಿ
-ಶ್ರೀ
No comments:
Post a Comment