ಬಿಡಿಸಿಟ್ಟ ಬೆರಳುಗಳ ಕಂಡಾಗಲೆಲ್ಲಾ
ಬೆರಳನ್ನು ಬೆರಳಲ್ಲಿ ನೀ ಕಟ್ಟುತ್ತಿದ್ದಾ, ನೆನಪು
ನೆಪ ಹೇಳಿಕೊಂಡು ತಡವಾದಾಗಲೆಲ್ಲಾ
ಮುತ್ತಿಡುವಂತ ಮುಷ್ಟಿಯಲಿ ನೀ ಮೊಟಕುತ್ತಿದ್ದಾ ನೆನಪು.
ಮರೆತಿಲ್ಲ ನಿನ್ನನ್ನು ಇನ್ನೂ ನನ್ನಾಣೆ !
ಕಾಣದಿರು ಕಣ್ಣೆದುರು ಬೇಡಿದರೂ ನಾನು
ನಾ ಕಣ್ಮುಚ್ಚುವ ಕ್ಷಣವೇ ನಿನಗೆ, ಆಹ್ವಾನ
ಸಂತೆಯಲ್ಲೂ ಕಳೆದೋಗುವಂತ, ಒಡನಾಟಕೆ
ಕಣ್ಮುಚ್ಚಿದರೆ ಆವರಿಸೋ ಕತ್ತಲೇ ಸೋಪಾನ
ಮರೆತಿಲ್ಲ ನಿನ್ನನ್ನು ಇನ್ನೂ ನನ್ನಾಣೆ!
ಕವಿತೆಗೆಂದು ಕೂತಾಗ ಕಲ್ಪನೆಯಲಿ ಕೂರುವೆ
ಕಲ್ಪನೆಯೇ ನಿನ್ನ ವಿಳಾಸವೆನ್ನಲೇ ?
ಯಾರು ನೀ ಎಂದು, ನನ್ನವಳು ಕೇಳಿದರೆ
"ಕಲ್ಪನಾ" ಎಂದು ನಿನ್ನ ಹೆಸರೇಳಲೇ ?
ಮರೆಯೋಲ್ಲ ನಿನ್ನನ್ನು ಎಂದೂ ನನ್ನಾಣೆ.
- ಶ್ರೀ
No comments:
Post a Comment