ತೆತ್ತಲು ನೆತ್ತರು ಕತ್ತಲು ಸರಿಯಿತು
ಬಿತ್ತಲು ಬಾವುಟ ಬಂಧನ ಹರಿಯಿತು
ಉಡಿಸಲು ಸೀರೆ ನಿಂತಳು ಭಾರತಿ
ನಿರ್ಮಲ ಭಾವದಿ ಮಾಡಿರಿ ಆರತಿ
ಅಡಿಯಲಿ ಸಾಗರ ಮುಡಿಯಲಿ ಪರ್ವತ
ಜೊತೆಯಲೆ ಸಾಗಿರಿ ಎಲ್ಲರು ಸೇರುತ
ಎಲ್ಲರ ಮನದಲಿ ನೆಲಸಲಿ ಒಮ್ಮತ
ಎಲ್ಲೆಡೆ ಜಗದಲಿ ಬೆಳಗಲಿ ಭಾರತ
Subscribe to:
Post Comments (Atom)
No comments:
Post a Comment