ದೃಷ್ಟಿ ಇರಿಸಿ ಗಡಿಯಾರದ ಮುಳ್ಳಿಗೆ
ಕಾದಿದ್ದಳು ಗೆಳೆಯ ಬರುವ
ಆ ಹೊತ್ತಿಗೆ ...
ಕಾಯೋ ಕಣ್ಣು ಮಂಕಾದರೂ
ಸುಂದರ ಸಂಜೆ ಕೆಂಪಾದರೂ
ನೀಡುತ್ತಿಲ್ಲ ಗೆಳೆಯ ಬರುವ ಸೂಚನೆ
ಹಗಲು ಕರಗೋ ಹೊತ್ತಾದರೂ
ತಾ ಕಾಯೋ ಕಾರಣ ಅವನಾದರೂ
ಎಲ್ಲಿ ಬರದೆ ಇರುವನೋ ಅನ್ನೋ ಯೋಚನೆ
ಆಗಲೇ ಬಂದನು ಗೆಳೆಯ
ಮೋಡ ಸರಿಸಿ ಪ್ರೀತಿ ಅರಸಿ
ಬೆಳದಿಂಗಳ ಸುಂದರ ಚಂದಿರನಂತೆ
ಮುಂಗುರುಳ ತೀಡುತ್ತ
ನಸುನಾಚಿಕೆ ಬೀರುತ್ತ
ಸ್ವಾಗತಿಸಿದಳು ಇನಿಯನ ಅರಳಿದ ಹೂವಂತೆ ....
No comments:
Post a Comment