Tuesday, January 26, 2010

ಯಾರವಳು ????

ಆಗಸದಾ ನೀಲಿ
ಮೋಡದ ಜೊತೆಯಲ್ಲಿ
ಕಾದಿರಲು ನಾನು ಮಳೆ ಹನಿಗೆ
ಕಣ್ಮುಚ್ಚಿ ತಲೆಯೆತ್ತಿ
ಮುಗುಳ್ನಗಲು ನಾನು
ಹನಿಯೊಂದು ತಾಕಿತು ನನ ಕೆನ್ನೆಗೆ

ನೆನೆಯುತ ಹಾಗೆ
ಸಾಗಲು ನಾನು
ಎದುರಾಗಲವಳು ಮಿಂಚಂತೆ
ನಿಂತಲ್ಲೇ ನಿಂತೆ
ತೋಚದೆ ಏನು
ಸಿಡಿಲೊಡೆದ ಮಾವಿನ ಮರದಂತೆ

ಮಳೆಯಿಂದ ದೂರ
ಅಂದಿಂದ ನಾನು
ಆ ನೆನಪಷ್ಟೇ ಈಗ ನನಗತ್ತಿರ
ಯಾರವಳು ಎಂಬ
ಪ್ರಶ್ನೆಗೆ ಮಾತ್ರ
ತಿಳಿದಿಲ್ಲ ಇನ್ನು ನನಗುತ್ತರ.......

Friday, January 22, 2010

ಅವಳು ಕಾದ ಸಂಜೆ .......

ಮುಡಿಗೇರಿಸಿ ಮಲ್ಲಿಗೆ
ದೃಷ್ಟಿ ಇರಿಸಿ ಗಡಿಯಾರದ ಮುಳ್ಳಿಗೆ
ಕಾದಿದ್ದಳು ಗೆಳೆಯ ಬರುವ
ಹೊತ್ತಿಗೆ ...

ಕಾಯೋ ಕಣ್ಣು ಮಂಕಾದರೂ
ಸುಂದರ ಸಂಜೆ ಕೆಂಪಾದರೂ
ನೀಡುತ್ತಿಲ್ಲ ಗೆಳೆಯ ಬರುವ ಸೂಚನೆ
ಹಗಲು ಕರಗೋ ಹೊತ್ತಾದರೂ
ತಾ ಕಾಯೋ ಕಾರಣ ಅವನಾದರೂ
ಎಲ್ಲಿ ಬರದೆ ಇರುವನೋ ಅನ್ನೋ ಯೋಚನೆ

ಆಗಲೇ ಬಂದನು ಗೆಳೆಯ
ಮೋಡ ಸರಿಸಿ ಪ್ರೀತಿ ಅರಸಿ
ಬೆಳದಿಂಗಳ ಸುಂದರ ಚಂದಿರನಂತೆ
ಮುಂಗುರುಳ ತೀಡುತ್ತ
ನಸುನಾಚಿಕೆ ಬೀರುತ್ತ
ಸ್ವಾಗತಿಸಿದಳು ಇನಿಯನ ಅರಳಿದ ಹೂವಂತೆ ....

Saturday, January 2, 2010

ಸುಂದರ ಕನಸು !!!!!!!!


ಈ ರಾತ್ರಿ ಹೀಗೆ ತಂಪಾಗಲು
ನನ್ನವಳ ನೆನಪು ಹೂವಾಯಿತು
ಕಣ್ನ್ ತುಂಬ ನಿದ್ದೆ ಆವರಿಸಲು
ಕನಸೊಂದು ಹಾಗೆ ತೆರೆ ಕಂಡಿತು

ಕ್ಯೆ ಬೀಸಿ ಕರೆಯಲು ನನ್ನನ್ನು ಅವಳು
ತಲೆ ಏರಿ ಕೂತಿತ್ತು ಪ್ರೀತಿಯ ಅಮಲು
ಕಾಲ್ಗೆಜ್ಜೆ ಸದ್ದು ಕೂಗಿತ್ತು ನನ್ ಹೆಸರು
ಅವಳ ಹೆಜ್ಜೆ ಹಿಂದೆ ಸಾಗಿತ್ತು ಉಸಿರು

ಆಗಾಗ ಹಿಂದಿರುಗಿ ನೀ ನನ್ನ ನೋಡಲು
ತೆರೆದಿರಿಸಿದೆ ಸುಮ್ಮನೆ ನನ್ನೆದೆಯ ಬಾಗಿಲು
ಸದ್ದಿಲ್ಲದೇ ಒಳಬಂದು ನೀ ನೋಡು ಗೆಳತಿ
ಈ ಪ್ರೀತಿ ಅರಮನೆಗೆ ನೀ ತಾನೇ ಒಡತಿ

ಸೂರ್ಯನ ಕಿರಣ ನನ್ನನ್ನು ಸುಡಲು
ಆಗಲೇ ಎದ್ದೆ ಹಗಲನ್ನು ನೋಡಲು
ಕನಸೆಂದು ತಿಳಿದು ನನ್ನನ್ನೇ ಶಪಿಸಿದೆ
ಕಾಣಲಿ ಮತ್ತೆ ಎಂದು ನಿದ್ದೆಗೆ ಯತ್ನಿಸಿದೆ