Sunday, October 25, 2009

ಸಂಭಾಷಣೆ

ಮೋಡದ ಒಳಗೆ ಹನಿಗಳ ಗೂಡು
ಬಾಯ್ತೆರೆದ ಭೂಮಿಯ ಕಡೆಗೂ ನೋಡು
ಮುಂದಾದರು ಹೋಗು
ಮಳೆಯಾದರು ಆಗು
ನಿಲ್ಲದಿರು ಹಾಗೆ ನಿಂತಲ್ಲೇ
ಮಳೆಯಾಗುವ ಆಸೆ ನಿನಗಿದ್ದರೆ
ಆಗಲದು ಈಗಲೇ ಇಲ್ಲೇ

ಇದು ನಮ್ಮ ರೈತನ ಸಂಭಾಷಣೆ
ಆಗಾಗ ನಿಂತು ಮಳೆಯಾಗದ
ಮೋಡಗಳೊಡನೆ...

1 comment:

  1. ಏನಪಾ ಭಗ್ನಪ್ರೇಮಿ,
    ಇಷ್ಟೊಂದು ಕವಿತೆಗಳಲ್ಲಿ "ನೀಡು ಉತ್ತರ", "ಮತ್ತೆ ಕಾಣಬೇಡ" ಚೆನ್ನಾಗಿವೆ. ಇದರಲ್ಲಿ ಏನೋ ಫೀಲ್ ಇದೆ. ಉಳಿದದ್ದು ಓಕೆ ಓಕೆ ಅನ್ನಿಸ್ತು. ಹೀಗೆ ಬರೀತಾ ಇರು.

    - ಷಡಕ್ಷರಿ.

    ReplyDelete