ಹುಡುಗ : ನೋಡಿ ನಂಗೆ ಮಾತಾಡೋಕೆ ಬರೊಲ್ಲ , ಇರೋ ವಿಷಯ ಇದ್ದಂಗೆ ಹೇಳ್ಬಿಡ್ತೀನಿ ಅಂತ ಹೇಳೋಕೆ ನಂಗಿಷ್ಟ ಇಲ್ಲ ...
ಒಂದ್ ಮಾತಲ್ಲಿ ಹೇಳಿ ಒಂದ್ ಹಾಳೆಲಿ ಗೀಚಾಕೊದಾಗಿದ್ರೆ ನಾ ಇಷ್ಟು ದಿನ ಕಾಯೋ ಅವ್ಯಶ್ಯಕತೆ ಇರಲಿಲ್ಲ ... ಇವತ್ತಿನ ನಂತರ ನನ್ ಜೀವನ ಮುಗಿಲಿಗೆ ಬಣ್ಣ ಎರೆಚೋ ಕಾಮನಬಿಲ್ಲಿನ ಥರನಾದರೂ ಆಗಬಹುದು ಟೈಮ್ ಚೆನ್ನಾಗಿಲ್ದೆ ಹೋದ್ರೆ ಬಿಜಾಪುರ ಬಸ್ ಮೂಲೆಯಲ್ಲಿ ಉಗಿಯೋ ಎಲೆ ಅಡಿಕೆ ಥರ ನಾದ್ರೂ ಆಗ್ಬೋದು.. so matter serious .. ನೀವು ನೆಮ್ಮದಿ ಕಳಕೊಳ್ಳದೆ ...ನಾ ಹೇಳೋ ಮಾತಿಗೆ ನಿಮ್ಮ ಕೇಳೋ ಕಿವಿನಾ ಒತ್ತೆ ಇಡಿ ...
ನಾ ಸ್ವಲ್ಪ practical .. ಆದ್ರೆ ನಿಮ್ಮನ್ನ ನೋಡಿದಾಗ ಭಾವುಕನಾದೆ
24 ವರ್ಷದಿಂದ ಪರಿಚಯ ಇರೋ ಈ ಹೃದಯ 85 ರ ಮೇಲೆ ನಿಮಿಷಕ್ಕೆ ಎಂದೂ ಬಡಿದಿರಲಿಲ್ಲ .. ನೀವ್ ಕಂಡ್ರಿ ... metre ಕಿತ್ಕೊಂಡ್ ಹೋಗೋ ಹಾಗೆ ಬಡಿಯೋಕ್ ಶುರುವಾಯ್ತು ... ಅರೆ .. ನೀವ್ ಯಾರ್ ರೀ ನನ್ನ ಈ ರೇಂಜಿಗೆ ತಲೆ ಕೆಡ್ಸೋಕೆ ? ಇದು ನನ್ನ ನಾ ಕೇಳ್ಕೊಂಡ್ ಪ್ರಶ್ನೆ ... google ನಲ್ಲಿ ಉತ್ತರ ಸಿಗೋ ಪ್ರಶ್ನೆ ಅಲ್ಲ ಇದು .. ಸೊ ಅ ಪ್ರಶ್ನೆ ಇನ್ನು ಹಾಗೆ ಇದೆ .. ಅದು ಬಿಡಿ
ಮ್ಯಾನೇಜರ್ ಗೆ ಮೆದುಳು ಕೊಟ್ಟು ನಿಮಗೆ ಮನುಸ್ ಕೊಟ್ಟು .. ಇನ್ನು ಉಳ್ದಿರೋ ತಲೇನ ದಿಂಬಿಗೆ ಕೊಟ್ಟು ಮಲ್ಗೋಣ ಅಂದ್ರೆ... ಆಗಲು ಏನ್ರಿ ನಿಮ್ದು... ನೆಮ್ಮದಿಯಾಗಿ ನಿದ್ದೆ ಮಾಡೋಕು ಬಿಡೋಲ್ಲ ... ಭೂಕಂಪ ಆಗಿ ಮನೆ ಕುಸ್ದೊದ್ರು .. ಕಣ್ ತೆಗಿದೆ ಎಡಗಡೆ ಇಂದ ಬಲಕ್ಕೆ ತಿರುಗಿ ಮಲಗಿದವ್ನು ನಾನು .. ಕಣ್ ಇರ್ಲಿ ಬಾಯಿ ಕೂಡ ತೆಗದು ಮಲಗೋ ಸ್ತಿಥಿಗ್ ತಂದಿದೀರ .. ನಿಮ್ಮನ್ನ ಅನ್ನೋದ್ರಲ್ಲಿ ಅರ್ಥ ಇಲ್ಲ ಬಿಡಿ .. ನಾವ್ ಹುಡುಗರೆ ಹೀಗೆ .. ಆಳನೂ ನೋಡದೆ ಈಜು ಬರುತ್ತೆ ಅನ್ನೋ ಧೈರ್ಯದಲ್ಲಿ ಹಾರಿಬಿಡ್ತ್ಹೀವಿ .. ಬಿದ್ ಮೇಲೆ ಬೈಕೊಳೋಣ ಅಂತ ಮೇಲ್ ನೋಡಿದ್ರೆ ಅಲ್ಲೂ ಯಾರ್ ಇರೋಲ್ಲ ...
ನನಲ್ಲಿ ಇಷ್ಟೆಲ್ಲಾ ಅನಾಹುತಗಳಾಗಿದಾವೆ ಅಂತ ನಿಮಗೆ ಒಂದ್ ಸುಳಿವು ಇಲ್ಲ ಅಂತ ನಂಗೊತ್ತು ..
ನಾ ಇಷ್ಟೆಲ್ಲಾ ಮಾತಾಡ್ತಿದ್ರು ನೀವು ಪಿಕ್ಚರ್ climax ಥರ ನೋಡ್ತಿರೋ ಮುಖ ನೋಡಿದ್ರೆ ನನಗ್ಯಾಕೋ ಹೆದರಿಕೆ ಆಗುತ್ತೆ ... ಕೊನೆ ಒಂದ್ ಮಾತ್ ಹೇಳಿ ಮನಸ್ ಗಟ್ಟಿ ಮಾಡ್ಕೊಂಡ್ ನಿಮ್ಮ ಉತ್ತರ ಕೇಳೋಣ ಅಂದ್ರೆ ... ಆ ಮನಸು ನನ್ನತ್ರ ಇಲ್ಲ ... ಗಟ್ಟಿ ಹಿಡಿಯೋಕೆ ಉಳ್ದಿರೋದು ಜೀವ ಒಂದೇ ..
ಆಯಿತು ಕೊನೆಮಾತು ಕೇಳೇ ಬಿಡಿ ... ನಂಗೆ ನೀವಂದ್ರೆ ತುಂಬಾ ಇಷ್ಟ .. ನೀವ್ ಹ್ಞೂ ಅಂದ್ರೆ ಇನ್ನುಳ್ದಿರೋ ದಿನಗಳನ್ನ ಕ್ಯಾಲೆಂಡರ್ ನೋಡ್ ದೇ ನಿಮ್ಮ ಜೊತೆ ಕಳ್ದ್ಬಿಡ್ತೀನಿ ಏನಂತೀರ ?
ಹುಡುಗಿ : ನೀವು ಈ ಮಾತನ್ನ 1 ತಿಂಗಳ ಹಿಂದೆ ಹೇಳಿದ್ರೆ .. ನಾ ಯೋಚನೆ ಮಾಡ್ತಿದ್ದೆ .. ಆದ್ರೆ ನಮ್ಮಮ್ಮ ನನಿಗೆ ಗಂಡು ನೋಡಿದಾರೆ ..
ಹುಡುಗ ಮನದೊಳಗೆ : ಮತ್ತೆ ನಾವ್ ಯಾರು ..
ಹುಡುಗಿ : ಅವ್ರು US ನಲ್ಲಿ software engineer ಅಲ್ಲೇ settled ... I am sorry ...
(ಹುಡುಗಿ ಹಿಂದಿರುಗಿ ಹೊರಟು ಬಿಡುತ್ತಾಳೆ)
ಹುಡುಗ ಮುಗುಳ್ನಗುತ್ತಾ... ಕೆಳಗಡೆ ನೋಡ್ತಾನೆ .. ಕೊಟ್ಟೆ ಅನ್ಕೊಂಡಿದ್ದ ಮನಸು ಕೆಟ್ಟದಾಗಿ ಕೆಸರಲ್ಲಿ ಬಿದ್ದಿರುತ್ತೆ
( background ನಲ್ಲಿ ನಮ್ಮ ಭಟ್ರ್ ಸಾಂಗ್ with full patho ಮ್ಯೂಸಿಕ್ "ಯಾರಿಗ್ ಹೇಳೋಣ ನಮ್ಮ ಪ್ರಾಬ್ಲೆಮ್ಮು ")