Monday, September 6, 2010

ವರ್ಣಮೈರಂ ...

 ( This song is written for tune of my favourite melodious song Nenjikul Peidhudum .. from Tamil movieVarnamaiyram, check the link  http://www.youtube.com/watch?v=Dw5WE1U0Bjo   for song.
If someone tries to sing this kannada version for original tune .. please give feedback)


ತಂಗಾಳಿ ಹಾಡೋ ಹಾಡಿಗೆ
ನಿನ್ನಂದ ಮಾಡೋ ಮೋಡಿಗೆ
ನನ್ನಾಣೆ ಸೋತೆ ಗಂಧವೇ
ಹೆಣ್ಣೇ ನೀ ಮಾಯೆಯೇ

ಇರುಳೆಲ್ಲ ಹೊಳೆಯೋ ತಾರೆ ನೀ
ಮುಂಜಾವಲರಳೋ ಹೂವು ನೀ
ಬಾಒಮ್ಮೆ ನನ್ನ ಕನಸಲೂ
ಧನ್ಯ ಈ  ಜೀವವೇ  ...

ಓ ಶಾಂತಿ ಶಾಂತಿ ಓ ಶಾಂತಿ
ನನ್ನುಸಿರುಸಿರಲ್ಲೂ ನೀನೇನೆ
ಇದು ಪ್ರೀತಿನೇನೋ ನಾ ಕಾಣೆ
ನರನಾಡಿಗಳಲ್ಲು ನೀನೇನೆ ....

ಏನೋ ಒಂದು ಸಣ್ಣ ಆಸೆ
ನಿನ್ನೊಡನೆ ಕಣ್ಣ ಭಾಷೆ
ನಿನ್ನಿಂದಲೇ ನಾನಿರೀತಿ
ಸದ್ದಿಲ್ಲದೇ ತೋರು  ಪ್ರೀತಿ

ಇಷ್ಟಾದ ನಂತರವೂ ಇನ್ನೇಕೆ ಮೌನವು
ಹೇಳೊಮ್ಮೆ ಹಾಗೆಯೇ ಬಚ್ಚಿಟ್ಟ ಭಾವವು
ನನ್ನೊಡಬಾ ಅರಳೊ ಹೂವೆ
ಇನ್ನೇತಕೆ ಹಾಗೆ ಇರುವೆ

ಇವಳ್ಯಾರೋ ಯಾರೋ ನಾ ಕಾಣೆ
ಶರಣಾದೆ ನಿನಗೆ  ನಿನ್ನಾಣೆ
ನನ್ನೊಳಗೂ ಹೊರಗು ಇವಳೇನೆ
ಅನುಕ್ಷಣವು  ನಿನ್ನ ಧ್ಯಾನಾನೆ


ತಂಗಾಳಿ ಹಾಡೋ ಹಾಡಿಗೆ  
ನಿನ್ನಂದ ಮಾಡೋ ಮೋಡಿಗೆ
ನನ್ನಾಣೆ ಸೋತೆ ಗಂಧವೇ
ಹೆಣ್ಣೇ ನೀ ಮಾಯೆಯೇ

ಇರುಳೆಲ್ಲ ಹೊಳೆಯೋ ತಾರೆ ನೀ
ಮುಂಜಾವಲರಳೋ ಹೂವು ನೀ
ಬಾಒಮ್ಮೆ ನನ್ನ ಕನಸಲೂ
ಧನ್ಯ ಈ  ಜೀವವೇ  ...  || ಪಲ್ಲವಿ ||

ನೀ ನಕ್ಕರೆ ಇರುಳು ಹಗಲೇ
ಆ ಚಂದಿರಾ ನಿನ್ನ ನೆರಳೆ
ಆಕಾಶದಾ ನೀಲಿ ಬಣ್ಣ
ತುಂಬಿಹುದು ನಿನ್ನ ಕಣ್ಣ

 ಎಲೆ ಮೇಲೆ ಹನಿಯೊಂದು  ನಿನ ಬಯಸಿ ಮೂಡಿತು
 ಬಣ್ಣಗಳ  ಗಣವೊಂದು ನಿನ ನೋಡಲು ಬಾಗಿತು
 ಮುದ್ದಾಡದಾ  ಗೊಂಬೆ ನೀನು
 ಮುದ್ದಾಡುವಾ ಆಸೆ ನಾನು

 ಏನಾಯ್ತೋ ಏನೊ  ಹೃದಯಾನೆ 
ಕರೆಯುತಿದೆ ನಿನ್ನೆ ತಂತಾನೇ
ಇನು ಅಳಿವೋ ಉಳಿವೋ ತಿಳಿದಿಲ್ಲ
ನನಗೇನೂ ಇನ್ನು ಉಳಿದಿಲ್ಲಾ

ತಂಗಾಳಿ ಹಾಡೋ ಹಾಡಿಗೆ
ನಿನ್ನಂದ ಮಾಡೋ ಮೋಡಿಗೆ
ನನ್ನಾಣೆ ಸೋತೆ ಗಂಧವೇ
ಹೆಣ್ಣೇ ನೀ ಮಾಯೆಯೇ

ಇರುಳೆಲ್ಲ ಹೊಳೆಯೋ ತಾರೆ ನೀ
ಮುಂಜಾವಲರಳೋ ಹೂವು ನೀ
ಬಾಒಮ್ಮೆ ನನ್ನ ಕನಸಲೂ
ಧನ್ಯ ಈ  ಜೀವವೇ  ...  || ಪಲ್ಲವಿ ||