ವಿಷಯ : ಹುಡುಗ ಹುಡುಗಿ ಇಬ್ಬರು ಒಬ್ಬರೊನೊಬ್ಬರು ತುಂಬಾ ಪ್ರೀತಿಸುತ್ತಾರೆ ,ಆ ವಿಷಯ ಇಬ್ಬರಿಗೋ ಗೊತ್ತು ಆದರೆ ಇಬ್ಬರೂ ಹೇಳಿಕೊಂಡಿರುವುದಿಲ್ಲ. ಆಗ ಇಬ್ಬರ ಮನದಲ್ಲೇ ನಡೆಯೋ ಸಂಭಾಷಣೆ.
ನೀನೆ ಬೇಕು
ನೀನೆ ಸಾಕು
ನೀನಿದ್ದರೆ ಹಗಲು
ನೀನಿದ್ದರೆ ಇರುಳು
ನೀನಿಲ್ಲದ ಬಾಳು
ಬೇಕಿಲ್ಲ ನನಗೆ ಕೇಳು (ಪಲ್ಲವಿ )
ನಿನಗೂ ತಿಳಿದಿಹುದು
ನನ್ನೊಳಗಿನ ಕಲರವವು
ನಾನೂ ಅರಿತಿಹೆನು
ನಿನ್ನೊಳಗಿನ ಪ್ರೀತಿಯನು
ಸಂಜ್ಞೆಯಲ್ಲೇ ಸಂಜೆ ಮುಗಿಸೋ
ಚೋರನೆ ..
ರೆಪ್ಪೆ ಬಡಿಯದೇ ನನ್ನ ನೋಡೋ
ಧೀರನೆ
ಹೇಳಿನ್ನು ಸಾಕು
ಮುರಿ ಮೌನ ಸಾಕು
ನೀ ನನಗೆ ಬೇಕು , ಬೇಕು
ನಿನ್ನ ಜೊತೆ ಇರಲೆಬೇಕು ....(ಚರಣ ೧ ಹುಡುಗಿ)
ನಿನಗೂ ತಿಳಿದಿಹುದು
ನನ್ನೊಳಗಿನ ಸಡಗರವು
ನಾನೂ ಅರಿತಿಹೆನು
ನಿನ್ನಾ ಒಳಮಾತನು
ಮಾತಲ್ಲೇ ನನ್ನೊಳಗೆ ಸ್ವರ ನುಡಿಸೋ
ವೀಣೆಯೇ
ಎಲ್ಲಾ ತಿಳಿದು ಇನ್ನೂ ನಟಿಸೋ
ಜಾಣೆಯೇ
ಹೇಳಿನ್ನು ಸಾಕು
ಮುರಿ ಮೌನ ಸಾಕು
ನೀ ನನಗೆ ಬೇಕು , ಬೇಕು
ನನ್ನ ಜೊತೆ ನೀನೆ ಬೇಕು ...(ಚರಣ ೨ ಹುಡುಗ )
Friday, February 12, 2010
Sunday, February 7, 2010
ಮಳೆ ತಂದ ನೆನಪು ....
ಮಳೆ ಬಂದರೆ ನೆನಪಾಗುವೆ
ಮಳೆ ನಿಂತರೆ ಮರೆಯಾಗುವೆ
ಏನೀ ಮಳೆಯೊಡನೆ
ನಿನ್ನ ಸಂಬಂಧ
ಮಳೆ ಹನಿಗಳ ಆ ಕಂಪಿಗೆ
ನಿನ ನೆನಪಿನ ಆ ಘಳಿಗೆಗೆ
ನನ್ನೇ ಮರೆಯುವೇನೂ
ನಿನ್ನೆ ಜಪಿಸುವೆನೂ
ನೆಪಕಾದರೂ ಮಳೆಯಾಗಲಿ
ನಿನ ನೆನಪಲಿ ಮೈ ಮರೆಯಲಿ
ನನ್ನ ಈ ಬಯಕೆ
ನಿಜವಾಗಲೀ ಕ್ಷಣಕೆ .....
Subscribe to:
Posts (Atom)